ಕೋಲ್ಕತ್ತಾ: ಮೋದಿ ಗ್ಯಾರಂಟಿಗೆ (Modi Guarantee) ವಾರಂಟಿ ಇಲ್ಲ. ಬಿಜೆಪಿ (BJP) ನಾಯಕರು ಬಂಗಾಳ ವಿರೋಧಿಗಳು ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ (Abhishek Banerjee) ಟೀಕಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ (TMC) ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಹೊರಗಿನವರು. ಅವರು ಬಂಗಾಳ ವಿರೋಧಿಗಳು. ಚುನಾವಣಾ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಭೇಟಿ ನೀಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ನ 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಮಾಜಿ ಕ್ರಿಕೆಟಿಗ ಯುಸೂಫ್ ಪಠಾಣ್ ಕಣಕ್ಕೆ
ರಾಜ್ಯದ ಹಣವನ್ನು ತಡೆಹಿಡಿಯುವ ಕೇಸರಿ ಪಾಳಯಕ್ಕೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ. ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಮಾತ್ರ ಭರವಸೆಗಳನ್ನು ಈಡೇರಿಸುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮತ್ತು ಅದರ ನಾಯಕರು ಹೊರಗಿನವರು. ಬಂಗಾಳ ವಿರೋಧಿಗಳು. ಅವರು ರಾಜ್ಯಕ್ಕೆ ನೀಡಬೇಕಾದ ಹಣವನ್ನು ಏಕೆ ತಡೆಹಿಡಿದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣಾ ಪ್ರಚಾರವನ್ನು ಭಾನುವಾರದ ಮಹಾ ರ್ಯಾಲಿಯೊಂದಿಗೆ ಪ್ರಾರಂಭಿಸಿತು. ಇದನ್ನೂ ಓದಿ: ಸಂದೇಶ್ಖಾಲಿ ಹಿಂಸಾಚಾರ ಪ್ರಕರಣ – ಶೇಖ್ ಷಹಜಹಾನ್ಗೆ ಸಿಬಿಐ ಕಸ್ಟಡಿ ವಿಸ್ತರಣೆ